ಪ್ರಜ್ವಲ್ ಸೋಲಿಸಲು ಸಿದ್ದರಾಮಯ್ಯ ಕರೆದೇವೇಗೌಡರ ವಿರುದ್ಧ ವಾಗ್ದಾಳಿ

ಬೇಲೂರು : ಹಾಸನ ಕ್ಷೇತ್ರದಲ್ಲಿ ಈ ಬಾರಿ ಪ್ರಜ್ವಲ್‌ರೇವಣ್ಣ ಅವರನ್ನು ಸೋಲಿಸಿ, ನಮ್ಮ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರನ್ನು ಗೆಲ್ಲಿಸಿ ಲೋಕಸಭೆ ಕಳುಹಿಸಿಕೊಡಬೇಕು ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.
ಬೇಲೂರಿನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ದೇವೇಗೌಡರು ಮುಂದಿನ ಜನ್ಮದಲ್ಲಿ ಮುಸ್ಲಿಂನಾಗಿ ಹುಟ್ಟುತ್ತೇನೆ ಎಂದಿದ್ದರು, ನರೇಂದ್ರಮೋದಿ ಪ್ರಧಾನಮಂತ್ರಿ ಆದರೆ ದೇಶ ಬಿಡ್ತಿನಿ ಎಂದೂ ಹೇಳಿದ್ದರು.
ಈಗ ದೇಶ ಬಿಟ್ಟು ಹೋದರಾ. ಆದ್ದರಿಂದ ಇವರ ಮಾತುಗಳನ್ನು ನಂಬದೆ ಕಾಂಗ್ರೆಸ್ ಗೆಲ್ಲಿಸುವಂತೆ ಮನವಿ ಮಾಡಿದರು.
ರಾಜ್ಯಕ್ಕೆ ಬಿಜೆಪಿ ಮಾಡುತ್ತಿರುವ ಅನ್ಯಾಯದ ಬಗ್ಗೆ ಪ್ರಜ್ವಲ್ ರೇವಣ್ಣ, ದೇವೇಗೌಡರು ನೆಪಕ್ಕೂ ಪಾರ್ಲಿಮೆಂಟಿನಲ್ಲಿ ಧ್ವನಿ ಎತ್ತಿಲ್ಲ ಏಕೆ ಎಂದು ಸಿ.ಎಂ ಪ್ರಶ್ನಿಸಿ, ಇಂತವರನ್ನು ಸೋಲಿಸಿ ಎಂದು ವಾಗ್ದಾಳಿ ನಡೆಸಿದರು.
ಡಿ.ಕೆ.ಶಿವಕುಮಾರ್, ಕೆ.ಎನ್.ರಾಜಣ್ಣ, ಶಿವಲಿಂಗೇಗೌಡ ಇದ್ದರು.

Post a Comment

0 Comments