ಮಾಂಸಕ್ಕಾಗಿ ಕಾಡೆಮ್ಮೆಗೆ ಗುಂಡಿಟ್ಟು ಹತ್ಯೆಇಬ್ಬರ ಬಂಧನ

ಸಕಲೇಶಪುರ : ಕಾಡೆಮ್ಮೆಯೊಂದನ್ನು ಮಾಂಸಕ್ಕಾಗಿ ಗುಂಡಿಟ್ಟು ಕೊಂದು ಮಾಂಸ ಸೇವಿಸಿದ್ದ ಪ್ರಕರಣದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ತಾಲ್ಲೂಕಿನ ಹೊಸೂರು ಎಸ್ಟೇಟ್‌ನಲ್ಲಿ ನಡೆದಿದೆ. ಉಮೇಶ್, ರವಿ ಬಂಧಿತ ಆರೋಪಿಗಳು.
ತಾಲ್ಲೂಕಿನ ಹೊಸೂರು ಎಸ್ಟೇಟ್ ಸಮೀಪ ಅಕ್ರಮವಾಗಿ ಕಾಡೆಮ್ಮೆಯೊಂದನ್ನು ಮಾಂಸಕ್ಕಾಗಿ ಬಂದೂಕಿನಿAದ ಗುಂಡು ಹಾರಿಸಿ ಕೊಂದು ಮಾಂಸ ಸೇವನೆ ಮಾಡುವಾಗ ಖಚಿತ ಮಾಹಿತಿ ಮೇರೆಗೆ ವಲಯ ಅರಣ್ಯಾಧಿಕಾರಿ ಶಿಲ್ಪಾ ನೇತೃತ್ವದ ತಂಡ ದಾಳಿ ನಡೆಸಿ ಕಾಡೆಮ್ಮೆಯ ಸುಮಾರು ೧೦ ಕೆ.ಜಿಯಷ್ಟು ತಲೆ ಮಾಂಸ ಹಾಗೂ ಇತರ ಭಾಗಗಳನ್ನು ವಶ ಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಧಿಸಿದAತೆ ಹೊಸೂರು ಎಸ್ಟೇಟ್‌ನ ಉಮೇಶ್, ರವಿ ಎಂಬುವರನ್ನು ಬಂಧಿಸಿದ್ದು, ಆಕಾಶ್, ಅಜೀಜ್, ಸೋಮಣ್ಣ, ಇಕ್ಕೀಲ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. 
ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ದಿನೇಶ್, ಮಹಾದೇವ್, ಅರಣ್ಯ ವೀಕ್ಷಕರಾದ ಲೋಕೇಶ್, ಯೋಗೇಶ್, ಅರುಣ್, ಸ್ಟೀವನ್, ಸಾಗರ್ ಭಾಗಿಯಾಗಿದ್ದರು.

Post a Comment

0 Comments