ಹಾಸನ : ಲೋಕಸಭಾ ಚುನಾವಣೆ ನೀತಿಸಂಹಿತೆ ಜಾರಿಯಾದ ಮಾ.16 ರಿಂದ 31 ರವರೆಗೆ ಜಿಲ್ಲೆಯಲ್ಲಿ ಅಬಕಾರಿ ಇಲಾಖಾ ಅಧಿಕಾರಿಗಳು ಅಕ್ರಮ ಮದ್ಯ ಉತ್ಪಾದನೆ, ಸಾಗಣೆ, ಮಾರಾಟ ಸೇರಿ ಒಟ್ಟು 682 ಪ್ರಕರಣಗಳಲ್ಲಿ 73.67 ಲಕ್ಷರೂ. ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ.
ಹಾಸನ ವಲಯ-1ರಲ್ಲಿ ಒಟ್ಟು 59, ಹಾಸನ ವಲಯ-2ರಲ್ಲಿ ಒಟ್ಟು 151, ಬೇಲೂರು ತಾಲ್ಲೂಕಿನಲ್ಲಿ ಒಟ್ಟು 59, ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ 55, ಅರಸೀಕೆರೆಯಲ್ಲಿ ಒಟ್ಟು 75, ಸಕಲೇಶಪುರದಲ್ಲಿ 75, ಅರಕಲಗೂಡಿನಲ್ಲಿ 134, ಹೊಳೆನರಸೀಪುರದಲ್ಲಿ 74 ಪ್ರಕರಣ ದಾಖಲಿಸಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ 682 ವಿವಿಧ ಅಬಕಾರಿ ಪ್ರಕರಣ ದಾಖಲಿಸಲಾಗಿವೆ.
ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವನೆ ಅಪರಾಧಗಳಿಗೆ ಸಂಬAಧಿಸಿ 563 ಪ್ರಕರಣ, ಮದ್ಯದಂಗಡಿಗಳಲ್ಲಿ ಅಕ್ರಮವಾಗಿ ಸನ್ನದು ಷರತ್ತುಗಳ ಉಲ್ಲಂಘನೆಗೆ 32 ಪ್ರಕರಣ, ಗಾಂಜಾ ಸೇವನೆ ಪ್ರಕರಣಕ್ಕೆ 10 ಪ್ರಕರಣಗಳನ್ನು ದಾಖಲಿಸಲಾಗಿದೆ. ಇದುವರೆಗಿನ ಕಾರ್ಯಾಚರಣೆಯಲ್ಲಿ 3343 ಲೀಟರ್ ಮದ್ಯ, 561 ಲೀಟರ್ ಬಿಯರ್, 34 ಲೀಟರ್ ವೈನ್, 14 ಲೀಟರ್ ಸೇಂದಿ ವಶಪಡಿಸಲಾಗಿದೆ. 36 ವಿವಿಧ ವಾಹನಗಳನ್ನು ಜಪ್ತಿ ಮಾಡಿ, 652 ಆರೋಪಿಗಳನ್ನು ದಸ್ತಗಿರಿ ಮಾಡಿ, ಅಂದಾಜು 73.67 ಲಕ್ಷರೂ. ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ. ಸಾರ್ವಜನಿಕರು ಚುನಾವಣಾ ಅಬಕಾರಿ ಅಕ್ರಮದ ಬಗ್ಗೆ ಯಾವುದೇ ಮಾಹಿತಿ ನೀಡಲು ಸಹಾಯವಾಣಿ ಸಂಖ್ಯೆ 18004252098 ಕರೆ ಮಾಡಬಹುದಾಗಿದೆ.
0 Comments