ಹಾಸನ : ಪತ್ರಕರ್ತರೇ ನಟಿಸಿ ನಿರ್ಮಿಸಿರುವ ದಿ ಡಾರ್ಕ್ ವೆಬ್ ಸಿನಿಮಾ ಏ. 5 ರಂದು ನಗರದ ಪೃಥ್ವಿ ಚಿತ್ರ ಮಂದಿರದಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ಮಂಜು ಬನವಾಸೆ ಅವರು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ 10.30 ಹಾಗು ಮಧ್ಯಾಹ್ನ 1.30ಕ್ಕೆ ಎರಡು ಶೋ ಸಿಕ್ಕಿದೆ. ಸೈಬರ್ ಕ್ರೈಮ್ ಗಳ ಆಧರಿಸಿ ಮಾಡಿರುವ ಸಿನಿಮಾ ಇದಾಗಿದೆ. ಬಹತೇಕ ಚಿತ್ರಿಕರಣ ಹಾಸನದಲ್ಲೇ ಆಗಿದೆ. ಪತ್ರಕರ್ತರೇ ತೊಡಗಿರುವ ಚಿತ್ರ ಇದಾಗಿದ್ದು ಸುದ್ದಿಯಾಗಿ ಏನನ್ನ ನೋಡ್ತಿವಿ ಅದನ್ನೇ ಕಥೆಯಾಗಿ ತೆರೆ ಮೇಲೆ ತಂದಿದ್ದೇವೆ ಎಂದರು.
ಬ್ಯಾಂಕ್ ಅಕೌಂಟ್ ನಿಂದ ಹಣ ಹೊಗೋದು, ರಾಜಕಾರಣಿಗಳು ಮಾಡುವ ಅನಾಚಾರ ಈ ರೀತಿಯ ಎಳೆಗಳನ್ನಿಟ್ಟುಕೊಂಡು ಸಿನಿಮಾ ಮಾಡಲಾಗಿದೆ. ದಾರಕ್ಕೆ ಮಣಿ ಪೋಣಿಸಿದಂತೆ ಕಥೆ ಜೋಡಿಸಲಾಗಿದೆ. ನಾವು ಈ ಸಿನಿಮಾವನ್ನು ದುಡ್ಡು ಹೆಚ್ಚಾಗಿ ಮಾಡಿಲ್ಲ. ಕಾಲೇಜು ದಿನಗಳಲ್ಲೇ ಈ ಕನಸಿತ್ತು ಎಂದರು.
ನಿರ್ದೇಶಕ ಕಿರಣ್ ಸ್ವಾಮಿ, ನಟ ಚೇತನ್
ನಾಯಕ ನಟಿ ಮೇಘನಾ, ಸಹ ನಟರಾದ ನಾಗರಾಜು, ಬಿ.ಆರ್.ಬೊಮ್ಮೆಗೌಡ, ಮಂಜೇಗೌಡ, ನಿರ್ಮಾಪಕ ಹೆತ್ತೂರು ನಾಗರಾಜ್ ಇತರರಿದ್ದರು.
0 Comments