ಹಾಸನ: ಲೋಕಸಭೆ ಚುನಾವಣೆ ಹಿನ್ನಲೆ ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷದಲ್ಲಿ ಚಟುವಟಿಕೆಗಳು ಬಿರುಸಾಗಿದ್ದು, ಅಶೋಕ ಹೋಟೆಲ್ ನಲ್ಲಿ ಎರಡನೇ ಸುತ್ತಿನ ಸಮನ್ವಯ ಸಭೆ ನಡೆಯುತ್ತಿದೆ. ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನದಾಸ್ ಅಗರ್ವಾಲ್, ಸಂಸದ ಪ್ರಜ್ವಲ್ ರೇವಣ್ಣ, ವಿಧಾನಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್, ಮಾಜಿ ಶಾಸಕ ಬೆಳ್ಳಿ ಪ್ರಕಾಶ್, ಯೋಗಾರಮೇಶ್ ಭಾಗವಹಿಸಿದ್ದಾರೆ. ಹೋಟೆಲ್ ನ ಹಾಲ್ ನಲ್ಲಿ ರಹಸ್ಯ ಸಭೆ ನಡೆಯುತ್ತಿದ್ದು, ಬಿಜೆಪಿಯ ಇತರ ನಾಯಕರು ಹೊರಗಡೆ ಕುಳಿತಿದ್ದಾರೆ.
0 Comments