ಹಾಸನ: ಮುತ್ಸದ್ದಿ ರಾಜಕಾರಣಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುರಿತು ಹಗುರವಾಗಿ ಮಾತನಾಡಿರುವ ಸಚಿವ ಕೆ.ಎನ್.ರಾಜಣ್ಣ ಅವರಿಗೆ ಜನತೆ ತಕ್ಕ ಉತ್ತರ ನೀಡುತ್ತಾರೆ ಎಂದು ಸಂಸದ ಪ್ರಜ್ವಲ್ ರೇವಣ್ಣ ತಿರುಗೇಟು ನೀಡಿದರು.
ಸಾಯೋ ವಯಸ್ಸಲ್ಲಿ ದೇವೇಗೌಡರಿಗೆ ಮೈತ್ರಿ ಬೇಕಿತ್ತಾ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದರು. ದೇವೇಗೌಡ ಅವರು ಪ್ರಧಾನಿ, ಮುಖ್ಯಮಂತ್ರಿ ಆಗಿ ದೇಶಕ್ಕೆ ಕೊಡುಗೆ ನೀಡಿದ್ದಾರೆ. ಅಂತಹ ನಾಯಕರ ಬಗ್ಗೆ ಮಾತಾಡಿದರೆ ಜನರೇ ಉತ್ತರ ನೀಡ್ತಾರೆ ಎಂದರು.
ಹಾಸನದಲ್ಲಿ ಲೋಕಸಭೆ ಚುನಾವಣೆ ಪ್ರಚಾರಕ್ಕೆ ಮಾಜಿ ಶಾಸಕ ಪ್ರೀತಂ ಗೌಡ ಬರುತ್ತಾರೆ. ಅವರಿಗೆ ಮೈಸೂರು ಜವಾಬ್ದಾರಿ ನೀಡಿರುವುದರಿಂದ ತಡವಾಗುತ್ತಿದೆ ಎಂದರು.
0 Comments