4-5 ದಿನ ಟೈಮ್ ಕೊಡಿ ಅವ್ರನ್ನು ಬಂಧಿಸಬಹುದುಪೆನ್ ಡ್ರೈವ್ ಸಂಬಂಧ ಶಾಸಕ ಹೀಗೆ ಹೇಳಿದ್ದು ಯಾಕೆ?



ಹಾಸನ: ಪೆನ್ ಡ್ರೈವ್ ಪ್ರಕರಣ ವಿಚಾರದಲ್ಲಿ ನಾಲ್ಕೈದು ದಿನ ಟೈಮ್ ಕೊಡಿ ಸಂಸದ ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ್ ನನ್ನು ಬಂಧಿಸಬಹುದು ಎಂದು ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಎಸ್ ಐಟಿ ಅಧಿಕಾರಿಗಳು ಪಾರದರ್ಶಕ ತನಿಖೆ ಮಾಡುತ್ತಿದ್ದಾರೆ. ಕಾರ್ತಿಕ್ ನನ್ನ ಅವರು ಈಗಾಗಲೇ ವಿಚಾರಣೆಗೆ ಒಳಪಡಿಸಿರಬಹುದು. ಎಲ್ಲವನ್ನೂ ಮಾಧ್ಯಮದವರಿಗೆ ಹೇಳಲೇಬೇಕು ಅಂತ ಇಲ್ಲ. ಸ್ವಲ್ಪ ಕಾಯಿರಿ ನಾಲ್ಕೈದು ದಿನಗಳಲ್ಲಿ ಅಧಿಕಾರಿಗಳು ಆತನನ್ನು ಬಂಧಿಸಬಹುದು.
ಪೆನ್ ಡ್ರೈವ್ ವಿಚಾರವನ್ನ ರಾಜಕೀಯವಾಗಿ ಬಳಸಿಕೊಳ್ಳುವವರ ಮುಖಕ್ಕೆ ಉಗಿಯಬೇಕು. ರಾಜಕೀಯ ತೀಟೆಗಾಗಿ ಜಿಲ್ಲೆಗೆ ಕೆಟ್ಟ ಹೆಸರು ತರಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.

Post a Comment

0 Comments