ದರ್ಶನ್ ಅಭಿಮಾನಿಗಳಿಗೆ ಶಾಕ್ ಹಣ ವಾಪಾಸ್ ನೀಡಿದ ಅರಣ್ಯ ಇಲಾಖೆ

ಹಾಸನ: ಕಾಡಾನೆ ಜೊತೆಗಿನ ಕಾದಾಟದಲ್ಲಿ ವೀರ ಮರಣವಪ್ಪಿದ ಕ್ಯಾಪ್ಟನ್ ಖ್ಯಾತಿಯ ಅರ್ಜುನ (೬೩)ನ ಸ್ಮಾರಕ ವಿಚಾರ ಮುನ್ನಲೆಗೆ ಬಂದಿದೆ. ಸಕಲೇಶಪುರ ತಾಲ್ಲೂಕು ದಬ್ಬಳಿಕಟ್ಟೆ ಅರಣ್ಯ ಪ್ರದೇಶದಲ್ಲಿರುವ ಅರ್ಜುನನ ಸಮಾಧಿ ಜಾಗದಲ್ಲಿ ಸ್ಮಾರಕ ನಿರ್ಮಿಸದೆ ಆತನಿಗೆ ದಿಕ್ಕು ದೆಸೆ ಇಲ್ಲದಂತಾಗಿದೆ ಎಂದು ಚಿತ್ರನಟ ದರ್ಶನ್ ಅವರು ಎಕ್ಸ್ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ದರ್ಶನ್ ಅವರ ಅಭಿಮಾನಿಗಳು ಹಾಸು ಕಲ್ಲುಗಳನ್ನು ತಂದು ಸ್ಮಾರಕ ನಿರ್ಮಾಣಕ್ಕೆ ಮುಂದಾಗಿದ್ದರು. ಆದರೆ ಇದಕ್ಕೆ ಅರಣ್ಯ ಇಲಾಖೆ ತಡೆಯೊಡ್ಡಿದ್ದು, ಸರ್ಕಾರವೇ ಸ್ಮಾರಕ ನಿರ್ಮಿಸುವುದಾಗಿ ಘೋಷಿಸಿರುವುದರಿಂದ ಖಾಸಗಿ ವ್ಯಕ್ತಿಗಳ ಸಹಾಯ ಬೇಕಿಲ್ಲ ಎಂದಿದೆ. ಇನ್ನು ತರಲಾಗಿದ್ದ ಕಲ್ಲು ಹಾಸುಗಳನ್ನು ದುಡ್ಡು ಕೊಟ್ಟು ಖರೀದಿಸಿರುವ ಅರಣ್ಯ ಇಲಾಖೆ ಸಮಾಧಿ ಸುತ್ತಲೂ ಜೋಡಿಸಿ ಮಳೆ ನೀರಿಗೆ ಮಣ್ಣು ಜಾರದಂತೆ ಕ್ರಮ ಕೈಗೊಂಡಿದೆ. ಇನ್ನು ಸ್ಮಾರಕ ನಿರ್ಮಾಣಕ್ಕೆ ಮುಂದಾಗಿರುವುದನ್ನು ಸ್ಥಳೀಯರು ಪ್ರಶ್ನಿಸಿದ್ದು, ಸರ್ಕಾರದಿಂದಲೇ ಕೆಲಸ ಆಗಬೇಕೆಂದು ಒತ್ತಾಯಿಸಿದ್ದಾರೆ. ೨೦೨೩ರ ಡಿಸೆಂಬರ್ ೪ ರಂದು ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಅರ್ಜುನ ವೀರ ಮರಣ ಹೊಂದಿದ್ದ.
---------

Post a Comment

0 Comments