ಹಾಸನ: ಎಸ್‌ಐಟಿ ಮುಂದೆ ಹಾಜರಾಗುತ್ತೇನೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಅವರ ಕಾರು ಚಾಲಕ ವಿದೇಶಕ್ಕೆ ಹಾರಿದ್ನಾ ಎಂಬ ಸಂಶಯ ವ್ಯಕ್ತವಾಗಿದೆ.
ವಕೀಲ ಹಾಗೂ ಬಿಜೆಪಿ ಮುಖಂಡ ದೇವರಾಜೇಗೌಡ ವಿರುದ್ಧ ಆರೋಪ ಮಾಡಿ ವಿದೇಶಕ್ಕೆ ಹಾರಿದ್ರಾ ಎಂಬ ಚರ್ಚೆಗಳು ಜಿಲ್ಲೆಯಲ್ಲಿ ನಡೆಯುತ್ತಿವೆ.
ನನ್ನ ಬಳಿ ಇದ್ದ ವಿಡಿಯೋಗಳನ್ನು ದೇವರಾಜೇಗೌಡಗೆ ಮಾತ್ರ ನೀಡಿದ್ದೆ ಎಂದಿದ್ದ ಕಾರ್ತಿಕ್.
ಎಸ್‌ಐಟಿ ತನಿಖೆ ಆರಂಭವಾಗುತ್ತಲೇ ದೇವರಾಜೇಗೌಡ ವಿರುದ್ಧ ಕಾರ್ತಿಕ್
ವಿಡಿಯೋ ಹೇಳಿಕೆ ನೀಡಿದ್ದರು. ಎಸ್ ಐಟಿ ತನಿಖೆಗೆ ಹಾಜರಾಗುತ್ತೇನೆ ಎಂದು ಹೇಳಿ
ವಿದೇಶಕ್ಕೆ ತೆರಳಿದ್ದಾರೆ ಎನ್ನಲಾಗುತ್ತಿದ್ದು ಕಾರ್ತಿಕ್ ಅವರಿಗೆ ಪ್ರಭಾವಿಗಳ ಶ್ರೀರಕ್ಷೆಯಿದೆ ಎನ್ನಲಾಗುತ್ತಿದೆ.
0 Comments