ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಅಶ್ಲೀಲ ವಿಡಿಯೋಗಳನ್ನು ಬಿಡುಗಡೆ ಮಾಡಿದ್ದು ಡಿಸಿಎಂ ಡಿ.ಕೆ.ಶಿವಕುಮಾರ್ ಎಂದು ಆರೋಪಿಸಿರುವುದು ಸರಿಯಾದ ನಡೆಯಲ್ಲ ಎಂದು ಕಾಂಗ್ರೆಸ್ ವಕ್ತಾರ ದೇವರಾಜೇಗೌಡ ಹೇಳಿದರು.
ಪೆನ್ ಡ್ರೈವ್ ಬಿಡುಗಡೆ ಮಾಡಿದ್ದು, ಡಿ.ಕೆ.ಶಿವಕುಮಾರ್ ಆಗಿದ್ದರೆ ಅದನ್ನ ಎಸ್ ಐಟಿ ಮುಂದೆ ಹೇಳಲಿ. ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್.ಲಿಂಗೇಶ್ ಮಾಹಿತಿ ಇಲ್ಲದೆ ಆರೋಪ ಮಾಡಬಾರದು. ಬಿಜೆಪಿ ಮುಖಂಡ ದೇವರಾಜೇಗೌಡ ಸಹ ಇದೇ ರೀತಿ ಮಾತನಾಡಿದ್ದಾರೆ. ಪೆನ್ ಡ್ರೈವ್ ವಿಚಾರ ಶುರುವಾಗಿದ್ದೆ ದೇವರಾಜೇಗೌಡರಿಂದ. ಸಾವಿರಾರು ಮಹಿಳೆಯರ ಜೀವನ ಬೀದಿಗೆ ಬಿದ್ದಿದೆ. ಆಧಾರ ಇಲ್ಲದೆ ಮಾತನಾಡುವುದು ಸರಿಯಲ್ಲ ಎಂದರು.
ಜವಾಬ್ದಾರಿಯುತ ಸಂಸದನ ಮೇಲೆ ಆರೋಪವಿದೆ. ಹಲವಾರು ಮಹಿಳೆಯರ ಜೀವನದ ಪ್ರಶ್ನೆ ಇದಾಗಿದೆ.
ಸಾಕ್ಷಿಗಳನ್ನು ಹೆದರಿಸುವ ಕೆಲಸ ಕೆಲವರಿಂದ ಆಗುತ್ತಿದೆ. ಸಾಕ್ಷಿಗಳನ್ನು ನಾಶಪಡಿಸಿದರೂ ಅಪರಾಧವಾಗುತ್ತದೆ. ಸಂತ್ರಸ್ತರು ಯಾವುದೇ ಒತ್ತಡಕ್ಕೆ ಮಣಿಯದೆ ವಿಚಾರಣೆಗೆ ಹಾಜರಾಗಬೇಕು. ಗೌಪ್ಯತೆ ಕಾಪಾಡಲು ಸರ್ಕಾರ, ಕಾನೂನು, ಜಿಲ್ಲಾಡಳಿತ ಇದೆ ಎಂದರು.
ಮುಖಂಡರಾದ ಬಿ.ಕೆ.ಮಂಜುನಾಥ್, ಹೊಂಬೇಶ್, ಮಲ್ಲಿಗೆವಾಳು ದ್ಯಾವಪ್ಪ, ಅಶೋಕ ನಾಯಕರಹಳ್ಳಿ ಇದ್ದರು.
0 Comments