ಹಾಸನ: ಇಂದು ಎಸ್‌ಎಸ್‌ಎಲ್ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಯಲ್ಲಿ ಅಪರೂಪದ ಪ್ರಸಂಗ ನಡೆದಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮಗನ ಜೊತೆ ತಾಯಿಯೂ ಪಾಸ್ ಆಗಿದ್ದಾರೆ.
ಸಕಲೇಶಪುರ ತಾಲ್ಲೂಕಿನ ಚಿನ್ನಳ್ಳಿ ಗ್ರಾಮದ 38 ವರ್ಷದ ಜ್ಯೋತಿ.ಪಿ.ಆರ್ ಎರಡನೇ ಬಾರಿ ಪರೀಕ್ಷೆ ಬರೆದಿದ್ದರು.
ಸಕಲೇಶಪುರ ತಾಲ್ಲೂಕು ಬಾಳ್ಳುಪೇಟೆಯ ಸಿದ್ದಣ್ಯಯ್ಯ ಹೈಸ್ಕೂಲ್‌ನಲ್ಲಿ ಮಗ
ನಿತಿನ್.ಸಿ.ಬಿ. ಜೊತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದರು.
ಇಂದು ಫಲಿತಾಂಶ ಪ್ರಕಟವಾಗಿದ್ದು 250 ಅಂಕ ಪಡೆದು ಜ್ಯೋತಿ.ಪಿ.ಆರ್. ತೇರ್ಗಡೆಯಾಗಿದ್ದಾರೆ.
ಪುತ್ರ ನಿತಿನ್.ಸಿ.ಬಿ. 580 ಅಂಕ ಪಡೆದಿದ್ದಾನೆ.
0 Comments