ಜಿಲ್ಲೆಯಲ್ಲಿ 213 ಡೆಂಗ್ಯು ಕೇಸ್ ದೃಢ ಹಿಮ್ಸನಲ್ಲಿ ಹಾಸಿಗೆ ಸಂಖ್ಯೆ ದಿಢೀರ್ ಏರಿಕೆ

ಹಾಸನ: ಜಿಲ್ಲೆಯಲ್ಲಿ ಮಾರಕ ಡೆಂಗ್ಯು ಕಾಯಿಲೆಗೆ ಇದುವರೆಗೆ ಇಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಿವಸ್ವಾಮಿ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಒಟ್ಟು ನಾಲ್ವರ ಸ್ಯಾಂಪಲ್ ಗಳನ್ನು ಲ್ಯಾಬ್ ಗೆ ಕಳುಹಿಸಿಕೊಡಲಾಗಿತ್ತು. ಇಬ್ಬರು ಡೆಂಗ್ಯುನಿಂದ ಮೃತಪಟ್ಟಿರುವುದು ದೃಢಪಟ್ಟಿದೆ, ಜಿಲ್ಲೆಯ 213 ಜನರಿಗೆ ಡೆಂಗ್ಯು ದೃಢಪಟ್ಟಿದೆ ಎಂದರು.
ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಡೆಂಗ್ಯು ಪರೀಕ್ಷೆಗೆ 300₹ ದರ ನಿಗದಿಪಡಿಸಲಾಗಿದೆ ಎಂದರು. 
ಹಿಮ್ಸ್ ನಿರ್ದೇಶಕ ಡಾ.ಎಸ್.ವಿ.ಸಂತೋಷ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಡೆಂಗ್ಯು ಪ್ರಕರಣ ಹೆಚ್ಚುತ್ತಿರುವ ಹಿನ್ನಲೆಆಸ್ಪತ್ರೆಯಲ್ಲಿ ಬೆಡ್ ಸಂಖ್ಯೆಯನ್ನು 750 ರಿಂದ 1250ಕ್ಕೆ ಹೆಚ್ಚಿಸಲಾಗಿದೆ ಎಂದರು.

Post a Comment

0 Comments