ದಾಯಾದಿ ಜಗಳ ಕೊಲೆಯಲ್ಲಿ ಅಂತ್ಯಅಣ್ಣ ಮಾಡಿದ್ದ ತಪ್ಪಾದ್ರೂ ಏನು?

ಚನ್ನರಾಯಪಟ್ಟಣ : ಕ್ಷುಲ್ಲಕ ಕಾರಣಕ್ಕಾಗಿ ಸಹೋದರರ ನಡುವೆ ಆರಂಭವಾದ ಜಗಳ ಅಣ್ಣನ ಕೊಲೆಯಲ್ಲಿ ಅಂತ್ಯ ಕಂಡಿರುವ ಘಟನೆ ತಾಲ್ಲೂಕಿನ ದಮನಿಂಗಳ ಗ್ರಾಮದಲ್ಲಿ ಬುಧವಾರ ನಡೆದಿದೆ.
ಗ್ರಾಮದ ದಯಾನಂದ್‌ (40) ಮೃತರು. ಸಹೋದರ ವರುಣ್‌ ಚಾಕುವಿನಿಂದ ಇರಿದು ಹತ್ಯೆಗೈದ ಆರೋಪಿಯಾಗಿದ್ದು ಗಂಭೀರ ಗಾಯಗೊಂಡಿರುವ ಆತನನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. 
ಇಬ್ಬರೂ ಪ್ರತ್ಯೇಕ ಮನೆಯಲ್ಲಿ ವಾಸವಿದ್ದು ಬುಧವಾರ ಬೆಳಿಗ್ಗೆ ಜಲಜೀವನ್‌ ಮಿಷನ್‌ ಯೋಜನೆಯಡಿ ನೀರಿನ ನಲ್ಲಿ ಅಳವಡಿಸುವ ಜಾಗದ ವಿಚಾರವಾಗಿ ವಾಗ್ವಾದ ಆರಂಭಿಸಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿ ಪರಸ್ಪರ ಚಾಕು ಹಾಗು ಮಾರಕಾಸ್ತ್ರಗಳಿಂದ ಹೊಡೆದಾಡಿದ್ದಾರೆ. ದಯಾನಂದ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Post a Comment

0 Comments