ಹೊಳೆನರಸೀಪುರ: ಇಟ್ಟಿಗೆ ಕಾರ್ಖಾನೆಯಲ್ಲಿ ಮೂರು ವರ್ಷಗಳಿಂದ ಜೀತದಾಳುಗಳಾಗಿ ಕೆಲಸ ಮಾಡುತ್ತಿದ್ದ ನಾಲ್ವರು ಕಾರ್ಮಿಕರನ್ನು ರಕ್ಷಿಸಿರುವ ತಹಶೀಲ್ದಾರ್ ಕೃಷ್ಣಮೂರ್ತಿ ಅವರು ಕಾರ್ಖಾನೆ ಮಾಲೀಕನ ವಿರುದ್ದ ದೂರು ದಾಖಲಿಸಿದ್ದಾರೆ. ಒರಿಸ್ಸಾದ ಬಲಂಗಿರ್ ಜಿಲ್ಲೆ ಪೊನ್ನಾಗೋಡ್ ತಾಲ್ಲೂಕು ಕೋಪ್ರಾಕೋಲ್ ಗ್ರಾಮದ ಪುಟೇಲ್ (35), ಊರ್ಮಿಳಾ ಪುಟೇಲ್ (27), ವರ್ಷಿತಾ (11), ರಾಜು ಪುಟೇಲ್ (5) ರಕ್ಷಿಸಲ್ಪಟ್ಟ ಜೀತದಾಳುಗಳು. ತಾಲ್ಲೂಕಿನ ಜೋಡಿಗುಬ್ಬಿ ಗ್ರಾಮದಲ್ಲಿರುವ ಎಸ್.ಎಂ.ಇಟ್ಟಿಗೆ ಕಾರ್ಖಾನೆಯಲ್ಲಿ ಕಳೆದ ಮೂರು ವರ್ಷಗಳಿಂದ ಕಾರ್ಮಿಕರು ನರಕಯಾತನೆ ಅನುಭವಿಸುತ್ತಿದ್ದರು. ಕಾರ್ಖಾನೆ ಮಾಲೀಕ ಸತೀಶ್ ವಿರುದ್ದ ಹಳ್ಳಿಮೈಸೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಒರಿಸ್ಸಾ ಮೂಲದ ಈ ಕುಟುಂಬ ಉದ್ಯೋಗ ಅರಸಿ ಹಲವು ವರ್ಷಗಳಿಂದ ಕರ್ನಾಟಕಕ್ಕೆ ಬಂದಿದ್ದರು. ಮಂಡ್ಯದಲ್ಲಿ ಪ್ರದೀಪ್ ಎಂಬುವವರಿಗೆ ಸೇರಿದ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಆತ ಫ್ಯಾಕ್ಟರಿ ಮುಚ್ಚಿದ ಬಳಿಕ ಯಾರದೋ ಸಂಪರ್ಕ ಬೆಳೆಸಿ ಸತೀಶ್ ಜೋಡಿಗುಬ್ಬಿಗೆ ಕರೆದುಕೊಂಡು ಬಂದು ಕೆಲಸ ಮಾಡಿಸಿಕೊಂಡಿದ್ದ ಎಂದು ತಿಳಿದುಬಂದಿದೆ.
0 Comments