ಸೀಗೆ ಬಳಿ ಭೀಕರ ಅಪಘಾತ

ಅಯೋಧ್ಯೆಯಿಂದ ಬರುತ್ತಿದ್ದ ಮಹಿಳೆ ಸಾವು
ಹಾಸನ : ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹಳ್ಳಕ್ಕೆ ಕಾರು ಪಲ್ಟಿಯಾದ ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಸೀಗೆ ಸಮೀಪ ನಡೆದಿದೆ.
ಹಳೇಬೀಡು ನಿವಾಸಿ ಇಂದು (67) ಮೃತರು. ಶ್ರೀರಾಮನ ದರ್ಶನಕ್ಕೆ ಅಯೋಧ್ಯೆಗೆ ಪತಿ ಯೋಗೇಶ್‌ ಜೊತೆಗೆ ತೆರಳಿದ್ದರು. ಬೆಂಗಳೂರಿನ ಏರ್‌ಪೋರ್ಟ್‌ನಿಂದ ಕಾರಿನಲ್ಲಿ ಬರುತ್ತಿದ್ದರು. ಅಪಘಾತದಲ್ಲಿ ಚಾಲಕ ಕಿರಣ್‌ ಹಾಗು ಯೋಗೇಶ್‌ಗೆ ಗಂಭೀರ ಗಾಯಗಳಾಗಿವೆ. 
ಹಾಸನ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Post a Comment

0 Comments