ಸರ್ಕಾರಿ‌ ನೌಕರರ ಸಂಘಕ್ಕೆ ಕೃಷ್ಣೇಗೌಡ ಸಾರಥ್ಯ

ಬಿ.ಪಿ.ಕೃಷ್ಣೇಗೌಡ ಭರ್ಜರಿ ಗೆಲುವು




ಹಾಸನ: ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಬಿ.ಪಿ.ಕೃಷ್ಣೇಗೌಡ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ.

74 ನಿರ್ದೇಶಕರ ಮತಗಳ ಪೈಕಿ 42 ಮತಗಳನ್ನು ಪಡೆದುಕೊಳ್ಳುವ ಮೂಲಕ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ಪ್ರತಿಸ್ಪರ್ಧಿ  ಕೆ.ಎಂ.ಶ್ರೀನಿವಾಸ್ ಅವರು 31 ಮತಗಳನ್ನು ಪಡೆದು ಸೋಲು ಅನುಭವಿಸಿದರು.

ಜಿಲ್ಲಾ ಖಜಾಂಚಿಯಾಗಿ ಕೆ.ಆರ್.ಹೇಮಾಂತ್ ಅವರು 43 ಮತ ಪಡೆದುಕೊಂಡು ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಎಸ್.ಮಧು 31 ಮತ ಪಡೆದು ಪರಾಭವಗೊಂಡರು. ರಾಜ್ಯ ಪರಿಷತ್ ಸದಸ್ಯರಾಗಿ ಟಿ.ರಾಜು 37 ಮತ ಪಡೆದು ಗೆಲುವನ್ನು ತಮ್ಮದಾಗಿಸಿಕೊಂಡರೆ ಎಂ.ಎಲ್.ಮಂಜುನಾಥ್ 36 ಮತ ಪಡೆದುಕೊಂಡರೂ ಕೇವಲ ಒಂದು ಮತದಿಂದ ಸೋಲು ಅನುಭವಿಸಬೇಕಾಯಿತು.

Post a Comment

0 Comments