ಸಚಿವ ಮುನಿಯಪ್ಪ ಕಾರಿಗೆ ಡಿಕ್ಕಿಯಾದ ಭದ್ರತಾ ವಾಹನ

ಸಚಿವ ಮುನಿಯಪ್ಪ ಕಾರಿಗೆ ಡಿಕ್ಕಿಯಾದ ಭದ್ರತಾ ವಾಹನ



ಹಾಸನ: ಜನಕಲ್ಯಾಣ ಸಮಾವೇಶಕ್ಕೆ ಆಗಮಿಸುತ್ತಿದ್ದ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಅವರ ಕಾರು ಅಪಘಾತಕ್ಕೀಡಾದ ಘಟನೆ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 75ರ ಶಾಂತಿಗ್ರಾಮ ಟೋಲ್ ಬಳಿ ಹಿಂದಿನಿಂದ ಬಂದ ಕಾರೊಂದು ಡಿಕ್ಕಿ ಹೊಡೆದಿದೆ.

ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಪೊಲೀಸರು ತಕ್ಷಣವೇ ಎಚ್ಚೆತ್ತು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Post a Comment

0 Comments