ಹಾಸನ ಬೇಡವೆಂದು ಬರೆದುಕೊಟ್ಟಿದಿನಿ: ರಾಜಣ್ಣ

ಹಾಸನ ಬೇಡವೆಂದು ಬರೆದುಕೊಟ್ಟಿದಿನಿ: ರಾಜಣ್ಣ



ಹಾಸನ: ಜಿಲ್ಲಾ ಉಸ್ತುವಾರಿ ಸಚಿವರಾಗಿ ‌ನೀವೆ ಮುಂದುವರೆಯಿರಿ, ಮಾಧ್ಯಮಗಳಲ್ಲಿ ಸಚಿವರು ಬದಲಾಗ್ತಾರೆ ಅಂತ ಬರ್ತಿದೆ ಹಾಗೆ ಮಾಡ್ಬೇಡಿ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಕೋರಿದರು.

ಜಿ.ಪಂ. ಹೊಯ್ಸಳ ಸಭಾಂಗಣದಲ್ಲಿ ನಡೆಯುತ್ತಿರುವ ಕೆಡಿಪಿ ಸಭೆಗೆ ಶಾಸಕ ಹೆಚ್.ಪಿ. ಸ್ವರೂಪ್ ಜೊತೆಗೆ ಬಂದರು.

ಆರಂಭದಲ್ಲಿ ಸಚಿವ ರಾಜಣ್ಣ ಅವರು ಇಬ್ರು ಒಟ್ಟಿಗೆ ಬಂದ್ರಾ ಎಂದು ಪ್ರಶ್ನಿಸಿದರು. ಇಲ್ಲ ಬೇರೆ ಬೇರೆ ಬಂದ್ವಿ ಎಂದು ಸ್ವರೂಪ್ ಎಂದಾಗ ಇಬ್ಬರು ಒಂದೇ ರೀತಿ ಶರ್ಟ್ ಹಾಕೊಂಡು ಬಂದಿದ್ದೀರಲ್ಲಾ ಅದ್ಕೆ ಕೇಳ್ದೆ ಎಂದು ರಾಜಣ್ಣ ನಗೆ ಚಟಾಕಿ ಹಾರಿಸಿದರು. 

ಈ ವೇಳೆ ಮಾತನಾಡಿದ ಶಾಸಕ ಸಿ.ಎನ್.ಬಾಲಕೃಷ್ಣ, ಜಿಲ್ಲೆಯ ಉಸ್ತುವಾರಿ ಸಚಿವರಾಗಿ ನೀವೇ ಮುಂದುವರಿಯಿರಿ. ಮಾಧ್ಯಮಗಳಲ್ಲಿ ಬದಲಾಗುತ್ತಾರೆ ಅಂಥ ಬರ್ತಿದೆ. ನೀವೇ ಮುಂದುವರೆಯಬೇಕೆಂದು ಮನವಿ ಮಾಡುತ್ತೇನೆ. ನೀವೇ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೆ ಕೆಲಸಗಳಾಗುತ್ತವೆ ಎಂದರು.

ಆಗ ಉತ್ತರಿಸಿದ ಸಚಿವರು, ನಾನು ಹಾಸನ ಬೇಡ ಎಂದು ಬರೆದು ಕೊಟ್ಟು ಒಂದುವರೆ ತಿಂಗಳಾಗಿದೆ. ಬರವಣಿಗೆಯಲ್ಲಿ ಬರೆದು ಕೊಟ್ಟುಬಿಟ್ಟಿದ್ದೀನಿ ಎಂದು ಉತ್ತರಿಸಿದರು.

Post a Comment

0 Comments