200ಕ್ಕೂ ಹೆಚ್ಚು ರೈತರಿಗೆ ಮಕ್ಮಲ್ ಟೋಪಿ

200ಕ್ಕೂ ಹೆಚ್ಚು ರೈತರಿಗೆ ಮಕ್ಮಲ್ ಟೋಪಿ



ಸಕಲೇಶಪುರ: ತಾಲ್ಲೂಕು ಕೃಷಿ ಇಲಾಖೆಯ ಹೊರಗುತ್ತಿಗೆ ನೌಕರನೊಬ್ಬ ರೈತರಿಗೆ ಸವಲತ್ತು ಕಲ್ಪಿಸುವುದಾಗಿ ಲಕ್ಷಾಂತರ ರೂಪಾಯಿ ಪಡೆದು 200ಕ್ಕೂ ಹೆಚ್ಚು ಅನ್ನದಾತರಿಗೆ ಟೋಪಿ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ.

 ತುಂತುರು ನೀರಾವರಿ ಘಟಕ, ಪವರ್ ಟಿಲ್ಲರ್, ಬ್ರೆಷ್ ಕಟ್ಟರ್ ಹೀಗೆ ಕೃಷಿ ಇಲಾಖೆ ಯಿಂದ ಸಿಗುವ ಸೌಲಭ್ಯಗಳನ್ನು ನೀಡುವುದಾಗಿ ತನ್ನ ಖಾತೆಗೆ ಹಣ ಹಾಕಿಸಿಕೊಂಡು ಊರು ಬಿಟ್ಟಿದ್ದಾನೆ. ರೈತರು ಹಾಗು ಕೃಷಿ ಇಲಾಖೆ ಅಧಿಕಾರಿಗಳನ್ನು ಯಾಮಾರಿಸಿ ದವನ ಹೆಸರು ಹೆಚ್.ಆರ್.ಭರತ್. ಹತ್ತು ವರ್ಷಗಳಿಂದ ಕೃಷಿ ಇಲಾಖೆಯ ದಾಸ್ತಾನು ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದ ಈತ ಕಳೆದ ಒಂದು ವಾರದಿಂದ ಯಾರ ಕಣ್ಣಿಗೂ ಕಾಣದಂತೆ ಮಾಯವಾಗಿದ್ದಾನೆ. ಆತನ ಮೋಸ ಅರಿಯದೆ ಹಣ ಕಟ್ಟಿರುವ ರೈತರು ಕಂಗಾಲಾಗಿ ನಿತ್ಯ ತಾಲ್ಲೂಕು ಕೃಷಿ ಇಲಾಖೆ ಕಚೇರಿಗೆ ಅಲೆಯುತ್ತಿದ್ದಾರೆ. ಮುತ್ತಿನಂತ ಮಾತೇ ಭರತ್ ಬಂಡವಾಳ ಬಿ.ಕಾಂ. ಪದವೀಧರನಾಗಿರುವ ಬಾಳೆ ಗದ್ದೆಯ ಭರತ್‌ಗೆ ಮುತ್ತಿನಂತಹ ಮಾತೇ ಬಂಡವಾಳ. ರೈತರನ್ನು ಸುಲಭವಾಗಿ ಯಾಮಾರಿಸುವ, ಅಧಿಕಾರಿಗಳ ಗಮನಕ್ಕೆ ಬಾರದಂತೆ ವ್ಯವಹರಿಸುವ ಕಲೆಯನ್ನು ಕರಗತ ಮಾಡಿಕೊಂಡಿರುವ ಆತ ಕಳೆದ ಹತ್ತು ವರ್ಷಗಳಿಂದ ಟೋಪಿ ಹಾಕುವ ಕೆಲಸವನ್ನೇ ಮಾಡಿಕೊಂಡು ಬಂದಿದ್ದಾನೆ. ಆತನ ಮೇಲೆ ಸಂಶಯ ಬಂದು ಸಮಗ್ರ ಪರಿಶೀಲನೆ ನಡೆಸಿದಾಗ ಬಂಡವಾಳ ಬಯಲಾಗಿದೆ. ಆರು ವರ್ಷದ ಹಿಂದೆ ಕೃಷಿ ಇಲಾಖೆ ಕಟ್ಟಡ ಕಾಮಗಾರಿಗಾಗಿ ಸರ್ಕಾರದಿಂದ ಬಿಡುಗಡೆಯಾಗಿದ್ದ ಅನುದಾನದಲ್ಲಿ 16 ಲ.ರೂ. ದುರುಪಯೋಗ ಮಾಡಿ ಕೊಂಡಿದ್ದ. ಆಗಲೇ ಆತನನ್ನು ಕೆಲಸದಿಂದ ತೆಗೆದು ಹಾಕಿದ್ದರೆ ಸಮಸ್ಯೆ ಬಿಗಡಾ ಯಿಸುತ್ತಿರಲ್ಲಿಲ್ಲ. ಆದರೆ, ಇನ್ನೆಂದೂ ತಪ್ಪು ಮಾಡುವುದಿಲ್ಲವೆಂದು ಗೋಗರೆದಿದ್ದ ಆ ಕಾರಣಕ್ಕೆ ಅಧಿಕಾರಿಗಳು ಆತನಿಗೆ ಕ್ಷಮಾ ದಾನ ನೀಡಿದ್ದರು. ಜೊತೆಗೆ ಆತನಿಗೆ ದೊಡ್ಡ ವರ ಕೃಪಾಶೀರ್ವಾದವು ಇತ್ತು. ಹೀಗಾಗಿ ತನ್ನನ್ನು ಯಾರೂ ಏನೂ ಮಾಡಲು ಸಾಧ್ಯ ವಿಲ್ಲವೆಂದು ಕೃತ್ಯ ಮುಂದುವರೆಸಿದ್ದ ಎನ್ನಲಾಗಿದೆ. ಜನವರಿಯಲ್ಲೇ ಬಿಡುಗಡೆ 2025ರ ಜ.3 ರಂದು ಸಕಲೇಶಪುರಕ್ಕೆ ಭೇಟಿ ನೀಡಿದ್ದ ಆಹಾರ ಆಯೋಗದ ಅಧ್ಯಕ್ಷ ಹೆಚ್.ಆರ್.ಕೃಷ್ಣ ಅವರು ಲೆಕ್ಕಪತ್ರ ಪರಿಶೀಲಿಸಿದಾಗ ಲೋಪದೋಷಗಳನ್ನು ಕಂಡು ದಾಸ್ತಾನು ನಿರ್ವಾಹಕ ಭರತ್ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡಿದ್ದರು. ಅದರಂತೆ ಕೃಷಿ ಇಲಾಖೆ ಅಧಿಕಾರಿಗಳು ಆತನನ್ನು ಸೇವೆಯಿಂದ ಬಿಡುಗಡೆಗೊಳಿಸಿದ್ದರು. ದಾಸ್ತಾನು ನಿರ್ವಹಣೆಯನ್ನು ಬೇರೆಯ ವರಿಗೆ ವಹಿಸಿದ್ದರಿಂದ ಕಂಗಾಲಾದ ಭರತ್ ರೈತರಿಂದ ಹಣ ಕಟ್ಟಿಸಿಕೊಂಡು ಮೋಸ ಮಾಡಿರುವುದು ಬಹಿರಂಗವಾಗುತ್ತದೆಂದು ನಿತ್ಯ ಕಚೇರಿಗೆ ಬಂದು ತನಗೆ ಹಣ ನೀಡಿದವರು ದೂರು ನೀಡದೆ ಇರುವಂತೆ ಪ್ರಯತ್ನ ಮಾಡುತ್ತಿದ್ದ. ರೈತರಿಗೆ ತಾವು ದುಡ್ಡು ಕಟ್ಟಿದ್ದಕ್ಕೆ ಸವಲತ್ತು ಸಿಕ್ಕರೆ ಸಾಕೆಂದು ಆತನ ವಿರುದ್ಧ ದೂರು ಹೇಳದೆ ವಾಪಾಸ್ಸಾಗುತ್ತಿದ್ದರು. 

ಯಾವಾಗ ದಾಸ್ತಾನು ನಿರ್ವ ಹಣೆ ಜವಾಬ್ದಾರಿ ಕೈ ತಪ್ಪಿತೋ ಆ ಬಳಿಕ ಭರತ್ ಸಂಪೂರ್ಣ ಕುಗ್ಗಿದ್ದ. ಕೃಷಿ ಇಲಾ ಖೆಯ ಸವಲತ್ತು ಪಡೆಯಲು ರೈತರು ಸರ್ಕಾರಕ್ಕೆ ಹಣ ಕಟ್ಟದೆ ಸಂಬಂಧಪಟ್ಟ ಕಂಪನಿಗಳಿಗೆ ಆರ್‌ಟಿಜಿಎಸ್ ಮಾಡಬೇಕು. ಕೆಲವು ರೈತರು ತಾವೇ ಕಂಪನಿ ಅಕೌಂಟ್‌ಗೆ ಹಣ ಹಾಕಿದರೆ, ಮತ್ತೆ ಕೆಲವರು ಭರತ್ ನನ್ನು ಅವಲಂಬಿಸಿದ್ದರು. ಅದನ್ನೇ ಬಂಡ ವಾಳ ಮಾಡಿಕೊಂಡಿರುವ ಆತ ಆ ಹಣ ವನ್ನು ತನ್ನ ವೈಯಕ್ತಿಕ ಖಾತೆ, ಸ್ನೇಹಿತರ ಬ್ಯಾಂಕ್‌ಗೆ ಹಾಕಿಸಿಕೊಂಡಿದ್ದಾನೆ. ನೀರಾ ವರಿ ಘಟಕ, ಪವರ್ ಟಿಲ್ಲರ್ ಮತ್ತಿತರ ಸಾಮಾಗ್ರಿಗೆ ಹಣ ಕಟ್ಟಿದವರು ತಿಂಗಳಾ ದರೂ ತಲುಪಿಲ್ಲವೆಂದು ಕಚೇರಿಯಲ್ಲಿ ವಿಚಾರಿಸಿದಾಗ ರೈತರಿಂದ ಸಂಬಂಧಿಸಿದ ಕಂಪನಿಗೆ ಹಣ ತಲುಪದೆ ಇರುವುದು ಗೊತ್ತಾಗಿದೆ. ಆದರೆ, ಈಗ ಕಾಲ ಮಿಂಚಿ ಹೋಗಿದೆ. ಹಣ ಕಟ್ಟಿ ಮೋಸ ಹೋಗಿರುವ ರೈತರು ಭರತ್ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.


(ಹೇಳಿಕೆ)

ಹತ್ತು ವರ್ಷಗಳಿಂದ ಭರತ್ ದಾಸ್ತಾನು ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದ. ಕೃಷಿ ಇಲಾಖೆ ಸವಲತ್ತು ಕೊಡಿಸುವುದಾಗಿ 200ಕ್ಕೂ ಹೆಚ್ಚು ರೈತರಿಂದ ಹಣ ಪಡೆದು ಮೋಸ ಮಾಡಿದ್ದಾನೆ. ರೈತರಿಂದ ನಿತ್ಯ ದೂರುಗಳು ಬರುತ್ತಿದ್ದು, ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಸದ್ಯ ಆತನನ್ನು ಕೆಲಸದಿಂದ ಬಿಡುಗಡೆಗೊಳಿಸಲಾಗಿದೆ. -ಪ್ರಕಾಶ್, ಸಹಾಯಕ ಕೃಷಿ ನಿರ್ದೇಶಕ 


Post a Comment

0 Comments