ಸಜ್ಜಾ ಕುಸಿತ ಪ್ರಕರಣ: ಮೃತರ ಸಂಖ್ಯೆ 3ಕ್ಕೆ ಏರಿಕೆ
ಹಾಸನ: ಬೇಲೂರಿನಲ್ಲಿ ಹಳೆಯ ಕಟ್ಟಡದ ಸಜ್ಜಾ ಕುಸಿದು ಗಂಭೀರ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಗುರುವಾರ ರಾತ್ರಿ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಮಾ. 9ರ ಭಾನುವಾರ ಬೇಲೂರು ಬಸ್ ನಿಲ್ದಾಣ ಎದುರಿನ ವಾಣಿಜ್ಯ ಮಳಿಗೆಯ ಸಜ್ಜಾ ಕುಸಿದು ಇಬ್ಬರು ಮೃತಪಟ್ಟಿದ್ದರು. ಮೂವರು ಗಂಭೀರ ಗಾಯೊಂಡಿದ್ದರು. ಗಾಯಾಳುಗಳ ಪೈಕಿ ಒಬ್ಬರಾದ ಜ್ಯೋತಿ (45) ಮೃತಪಟ್ಟಿದ್ದಾರೆ. ನೀಲಮ್ಮ ಹಾಗೂ ಶಿಲ್ಪಾ ಅವರಿಗೆ ಚಿಕಿತ್ಸೆ ಮುಂದುವರೆದಿದೆ.
ಸುಮಾರು ಇಪ್ಪತ್ತೈದು ವರ್ಷ ಹಳೆಯದಾದ ಕಟ್ಟಡದಲ್ಲಿ ನಾಲ್ಕು ಮಳಿಗೆಗಳಿದ್ದು ಈ ಜಾಗದ ವ್ಯಾಜ್ಯ ಕೋರ್ಟ್ ಮೆಟ್ಟಿಲೇರಿತ್ತು. ಹೀಗಾಗಿ ಅಂಗಡಿಗಳನ್ನು ಮುಚ್ಚಲಾಗಿತ್ತು. ಆದರೆ ಅಂಗಡಿ ಮಂಭಾಗದ ಖಾಲಿ ಜಾಗದಲ್ಲಿ ಬಡ ವ್ಯಾಪಾರಿಗಳು ಹೂವು, ಹಣ್ಣು ಮಾರಾಟ ಮಾಡುತ್ತಿದ್ದರು. ಭಾನುವಾರ ಮಧ್ಯಾಹ್ನ ದಿಢೀರ್ ಸಜ್ಜಾ ಕುಸಿದು ಬಿದ್ದು ಕಟ್ಟಡದ ಕೆಳಗೆ ವ್ಯಾಪಾರ ಮಾಡುತ್ತಿದ್ದ ಆರು ಮಂದಿಯಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರೆ ಮೂವರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದರು.

0 Comments