ತಾಯಿ-ಮಗನ ಆತ್ಮಹತ್ಯೆಗೆ ಅಸಲಿ ಕಾರಣ ಇಲ್ಲಿದೆ
ಹಾಸನ: ಸೊಸೆಯ ಮಾನಸಿಕ ಹಿಂಸೆ ತಾಳಲಾರದೆ ತಾಯಿ ಮಗ ಕಟ್ಟೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರು ಎಂಬ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದ್ದು, ಮೃತ ಭರತ್ ಗೆ ಇದ್ದ ಮಾರಣಾಂತಿಕ ಕಾಯಿಲೆ ವಿಚಾರ ಬಹಿರಂಗವಾಗಿ ಮಾನ ಹರಾಜಾಗುತ್ತದೆಂದು ಸೊಸೆ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದರು ಎಂದು ತಿಳಿದು ಬಂದಿದೆ.
ಚನ್ನರಾಯಪಟ್ಟಣ ತಾಲ್ಲೂಕು ಕಬ್ಬಳಿ ಗ್ರಾಮದಲ್ಲಿ ಸೋಮವಾರ ರಾತ್ರಿ ಭರತ್ ಹಾಗೂ ಆತನ ತಾಯಿ ಜಯಂತಿ ಊರ ಕಟ್ಟೆಗೆ ಹಾರಿ ಪ್ರಾಣ ಕಳೆದುಕೊಂಡಿದ್ದರು. ಡೆತ್ ನೋಟ್ ನಲ್ಲಿ ಸೊಸೆ ಗೀತಾಳಿಂದ ಮಾನಸಿಕ ಹಿಂಸೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿದ್ದರು. ಆದರೆ ಅಸಲಿ ಕತೆ ಬೇರೆಯೇ ಇದೆ.
ಎಂಟು ತಿಂಗಳ ಹಿಂದಷ್ಟೇ ಮದುವೆ ಆಗಿದ್ದ ಭರತ್ ಗೆ ಮಾರಣಾಂತಿಕ ಕಾಯಿಲೆ ಸೋಂಕು ತಗುಲಿತ್ತು. ಆ ವಿಚಾರ ಮುಚ್ಚಿಟ್ಟು ಭರತ್ ಮಾತ್ರೆ ತೆಗೆದುಕೊಳ್ಳುತ್ತಿದ್ದ. ಮದುವೆಯಾದ ಹದಿನೈದು ದಿನ ಮಾತ್ರ ಪತ್ನಿ ಜೊತೆ ಸಂಸಾರ ಮಾಡಿದ್ದ. ಆ ನಂತರದಲ್ಲಿ ಅಂತರ ಕಾಯ್ದುಕೊಂಡಿದ್ದ. ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದ್ದ ಪತ್ನಿ ಗೀತಾ ಭರತ್ ತೆಗೆದುಕೊಳ್ಳುತ್ತಿದ್ದ ಮಾತ್ರೆಗಳ ಫೋಟೊ ಅನ್ನು ತನ್ನ ಅಕ್ಕನಿಗೆ ಕಳುಹಿಸಿದಾಗ ಅದು ಗಂಭೀರ ಕಾಯಿಲೆಗೆ ತೆಗೆದುಕೊಳ್ಳುವ ಮಾತ್ರೆ ಎಂಬುದು ಗೊತ್ತಾಯಿತು. ಆಗ ಆಕೆಯ ಪೋಷಕರು ಸೋಮವಾರ ಇಬ್ಬರ ಹೆಲ್ತ್ ಚೆಕ್ ಅಪ್ ಗೆ ನಿರ್ಧರಿಸಿದ್ದರು. ಆರೋಗ್ಯ ತಪಾಸಣೆ ಮಾಡಿಸಿಕೊಂಡರೆ ಮುಚ್ಚಿಟ್ಟ ಹುಳುಕು ಬಹಿರಂಗ ಆಗುತ್ತದೆಂದು ಆತ್ಮಹತ್ಯೆಗೆ ನಿರ್ಧರಿಸಿ ಅದರ ಹೊಣೆಯನ್ನು ಸೊಸೆ ಮೇಲೆ ಹೇರಲು ವ್ಯವಸ್ಥಿತ ತಂತ್ರ ರೂಪಿಸಿದ್ದರು.

0 Comments