ಫೈನಾನ್ಸ್ ಕಿರುಕುಳಕ್ಕೆ ಮಹಿಳೆ ಆ*ತ್ಮಹತ್ಯೆ
ಹಾಸನ: ಮೈಕ್ರೋ ಫೈನ್ಸಾನ್ ಸಿಬ್ಬಂದಿ ಕಿರುಕುಳ ತಾಳಲಾರದೆ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಆಲೂರು ತಾಲ್ಲೂಕು ಹಳ್ಳಿಯೂರು ಗ್ರಾಮದ ಕೆಂಚಮ (50) ಮೃತರು. ಬಿಎಸ್‌ಎಸ್, ಇಐಎಫ್ ಫೈನಾನ್‌್ಸನಲ್ಲಿ 2 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಕೂಲಿ ಕೆಲಸ ಮಾಡಿಕೊಂಡಿದ್ದ ಕೆಂಚಮ ಪ್ರತಿ ತಿಂಗಳು ತಪ್ಪದೇ ಕಂತು ಪಾವತಿಸುತ್ತಿದ್ದರು. ಈ ತಿಂಗಳು ಹಣ ಇಲ್ಲದ ಕಾರಣ ಕಂತು ಕಟ್ಟಿರಲಿಲ್ಲ. ಆದರೆ ಈ ದಿನವೇ ಹಣ ಕಟ್ಟಬೇಕೆಂದು ಫೈನಾನ್ ಸಿಬ್ಬಂದಿ ಮನೆ ಬಾಗಿಲಲ್ಲಿ ಕುಳಿತಿದ್ದರಿಂದ ಜಿಗುಪ್ಸೆಗೊಂಡ ಮಹಿಳೆ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ. ಆಲೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

0 Comments