ಆಲೂರು: ಮಲೆನಾಡಿನಲ್ಲಿ ಜೋರು ಮಳೆಯಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದರೂ ತಾಲ್ಲೂಕಿನ ಹೊಳೆಬೆಳ್ಳೂರು
ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ.
ತಾಲ್ಲೂಕಿನ ಹುಣಸುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಳೆಬೆಳ್ಳೂರು ಗ್ರಾಮದಲ್ಲಿ ಸುಮಾರು 200ಕ್ಕೂ ಹೆಚ್ಚು ಮನೆಗಳಿದ್ದು ಕಳೆದ ಒಂದು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ತಲೆದೂರಿದ್ದು ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮಸ್ಥರು ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ಹ್ಯಾಂಡ್ ಪಂಪ್ ಬಳಕೆ ಮಾಡುತ್ತಿದ್ದು ಹ್ಯಾಂಡ್ ಪಂಪ್ ನಲ್ಲಿ ಕುಲಷಿತ ನೀರು ಬರುತ್ತಿದೆ. ಇದೆ ನೀರನ್ನು ಬಳಸಬೇಕಾದ ಅನಿವಾರ್ಯತೆ ಎದುರಾಗಿದೆ.
ಖಾಸಗಿ ಕೊಳವೆ ಬಾವಿಗಳಿಂದ ಕುಡಿಯುವ ನೀರಿಗಾಗಿ ಗ್ರಾಮದ ಕೆಲವರು ಅಂಗಲಾಚಿ ನೀರು ಪಡೆಯುತ್ತಿದ್ದರು. ಅವರು ಮಾನವೀಯತೆಯಿಂದ ಇಟ್ಟು ನೀರು ನೀಡುತ್ತಿದ್ದರು.ಆದರೆ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಹಾ ಮಳೆಗೆ ವಿದ್ಯುತ್ ಕಂಬಗಳು ಧರೆಗೆ ಉರುಳಿರುವುದರಿಂದ ವಿದ್ಯುತ್ ಸಮಸ್ಯೆ ಎದುರಾಗಿದ್ದು ಗ್ರಾಮದಲ್ಲಿ ಸಮಸ್ಯೆ ಹೇಳತೀರದಾಗಿದೆ.
0 Comments