ಹಾಸನ: ಭೀಕರ ಅಪಘಾತದಲ್ಲಿ ಇಬ್ಬರ ಸಾವು

ಹಾಸನ: ತಾಲ್ಲೂಕಿನ ಮೊಸಳೆ ಗಡಿ ಬಳಿ ಸೋಮವಾರ ಡಿವೈಡರ್‌ಗೆ ಬೈಕ್‌ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಯುವಕರು ಮೃತಪಟ್ಟಿದ್ದಾರೆ. 
ಅಪಘಾತದಲ್ಲಿ ಅಪ್ರಾಪ್ತ ಗಂಭೀರ ಗಾಯಗೊಂಡಿದ್ದಾನೆ. ನಗರದ ಪೆನ್ಷನ್‌ ಮೊಹಲ್ಲಾ ನಿವಾಸಿ ಹುಸೈಫ್‌ (23), ಹೊಳೆನರಸೀಪುರ ಪಟ್ಟಣ ಗಾಂಧಿ ನಗರದ ನಿವಾಸಿ ಸಮೀರ್‌ (21) ಮೃತ ಯುವಕರು. ಪೆನ್ಷನ್‌ ಮೊಹಲ್ಲಾದ ಮಹಮದ್‌ ಸೂಫಿಯಾನ್‌ (15) ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂವರು ಒಂದೇ ಬೈಕ್‌ನಲ್ಲಿ ಹೊಳೆನರಸೀಪುರದಿಂದ ಹಾಸನದ ಕಡೆಗೆ ಬರುತ್ತಿದ್ದ ವೇಳೆ ಅತಿ ವೇಗದಿಂದ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಅಪಘಾತ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಗೊರೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Post a Comment

0 Comments