“18-7-2024ರಂದು ಹೈಕೋರ್ಟ್‌ನಲ್ಲಿ ಫೈಲ್ ಮಾಡಿದ ಅರ್ಜಿ ವಜಾ ಆಗಿದೆ. ಆಗ ನಾನು ಗೆದ್ದೆ ಗೆದ್ದೆ ಎಂದು ಪ್ರಚಾರ ಮಾಡಿಕೊಳ್ಳಬಹುದಿತ್ತು. ಈಗ ಅವರು ಸುಪ್ರೀಂ ಕೋರ್ಟ್‌ಗೆ ಅಪೀಲ್ ಮಾಡಿದ್ದಾರೆ ಅಷ್ಟೇ. ಅದನ್ನು ಪ್ರಚಾರಕ್ಕೆ ಬಳಸುವುದು ಸರಿಯಲ್ಲ. ಮಾಧ್ಯಮದವರು ಇದ್ದಾರೆಂದು ಪ್ರಚಾರಕ್ಕಾಗಿ ಹಾತೊರೆಯಬಾರದು ಎಂದರು.
ಕೋರ್ಟ್‌ನಲ್ಲಿ ಗೆದ್ದು ಬಂದರೆ ನನ್ನನ್ನು ಕೇಳಲಿ. ಇಲ್ಲದೇ ಮಾಧ್ಯಮದ ಮುಂದೆ ಕ್ರಿಯೇಟ್ ಮಾಡಿ ಪ್ರಚಾರ ಮಾಡೋದು ಕಾನೂನುಬಾಹಿರ, ಅಸಂವಿಧಾನಿಕ. ನ್ಯಾಯಕ್ಕೆ ಎಲ್ಲರೂ ತಲೆಬಾಗಬೇಕು. ಹೈಕೋರ್ಟ್ ವಜಾ ಮಾಡಿದ ಕಾರಣವೇ ಆ ಪ್ರಕರಣದಲ್ಲಿ ಹುರುಳಿಲ್ಲ ಎನ್ನುವುದು.
ನನಗೆ ಯಾವುದೇ ನೋಟಿಸ್ ಬಂದಿಲ್ಲ. ಕೋರ್ಟ್ ಸಿಬ್ಬಂದಿ, ಹಮೀನರು ಬಂದು ಕೊಡಬೇಕು. ನಾನು ವಕೀಲರನ್ನು ನಿಯೋಜನೆ ಮಾಡುತ್ತೇನೆಂದರು.
ಜನರು ಆಶೀರ್ವಾದ ಮಾಡಿದ್ದಾರೆ, ಜಿಲ್ಲೆ ಅಭಿವೃದ್ಧಿ ನನಗೆ ಮುಖ್ಯ. ಮೂರು ದಿನಕ್ಕೊಮ್ಮೆ ಪ್ರೆಸ್ ಮೀಟ್ ಮಾಡೋದು ನನ್ನ ಧ್ಯೇಯವಲ್ಲ. ನಾನು ಕೆಲಸ ಮಾಡ್ತಿದ್ದೇನೆ ಎಂದರು.
0 Comments