SARFAESI ಕಾಯ್ದೆಯಿಂದ ಕಾಫಿ ಬೆಳೆ ಹೊರಗಿಡುವಂತೆ ಸಂಸದರ ಮನವಿ




ಹಾಸನ: ಕೇಂದ್ರ ವಿತ್ತ ಸಚಿವೆ  ನಿರ್ಮಲಾ ಸೀತಾರಾಮನ್ ಅವರನ್ನು ನವದೆಹಲಿಯಲ್ಲಿ ಸಂಸದ ಶ್ರೇಯಸ್ ಪಟೇಲ್ ಭೇಟಿಯಾಗಿ SARFAESI ಕಾಯ್ದೆಯಿಂದ ಕಾಫಿ ಬೆಳೆಗಾರರನ್ನು ಹೊರಗಿಡುವಂತೆ ಮನವಿ ಸಲ್ಲಿಸಿದರು.
ಹಾಸನ ಲೋಕಸಭಾ ಕ್ಷೇತ್ರದಲ್ಲಿ ಸಾವಿರಾರು ಕಾಫಿ ಬೆಳೆಗಾರರಿಗೆ ಕಾಯ್ದೆಯಿಂದ ಅನಾನುಕೂಲವಾಗುತ್ತಿದೆ. 
ಕಾಫಿ ಬೆಳೆಯನ್ನು ಕೃಷಿ ಚಟುವಟಿಕೆಯೆಂದು ಸುದೀರ್ಘ ಕಾಲದಿಂದ ಗುರುತಿಸಲಾಗಿದೆ. ಈ ವಿಚಾರವನ್ನು ಮನಗಂಡು, ಕಾಫಿ ಬೆಳೆಗಾರರು ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಹಾಗೂ ಇತರ ಕೃಷಿ ಸಾಲ ಯೋಜನೆಗಳ ಅಡಿಯಲ್ಲಿ ಸಾಲ ಪಡೆಯುತ್ತಿದ್ದಾರೆ. ಇಂತಹ ಸಾಲಗಳನ್ನು ಸದಾ 'ಅಗ್ರಿಕಲ್ಚರ್ ಪ್ರಯಾರಿಟಿ ಸೆಕ್ಟರ್ ಲೆಂಡಿಂಗ್' ಅಡಿಯಲ್ಲಿ ವಿಂಗಡಿಸಲಾಗಿದೆ.
ಆದರೆ ಇತ್ತೀಚಿನ ಕೆಲ ವರ್ಷಗಳಿಂದ ಕೆಲ ಬ್ಯಾಂಕುಗಳು ಈ ಸಾಲಗಳನ್ನು SARFAESI ಕಾಯ್ದೆ 2002ರ ಅಡಿಯಲ್ಲಿ ವಸೂಲಾತಿಗೆ ತೆಗೆದುಕೊಳ್ಳುತ್ತಿವೆ.

ಅನಿಶ್ಚಿತ ಹವಾಮಾನದಿಂದ ಉಂಟಾಗುತ್ತಿರುವ ಬೆಳೆ ನಷ್ಟ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಕುಸಿತದ ಹಿನ್ನೆಲೆಯಲ್ಲಿ ಈ ರೀತಿಯ ಕ್ರಮಗಳು ಸಣ್ಣ ಹಾಗೂ ಮಧ್ಯಮ ಪ್ರಮಾಣದ ಬೆಳೆಗಾರರನ್ನು ಸಂಕಷ್ಟಕ್ಕೆ ಸಿಲುಕಿಸುತ್ತದೆ. 
ಆದ್ದರಿಂದ ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳಿಗೆ ಕಾಫಿ ಸಾಲಗಳನ್ನು ಕೃಷಿ ಸಾಲಗಳೆಂದು ಪರಿಗಣಿಸಿ SARFAESI ಕಾಯ್ದೆಯ ಕಾನೂನು ಕ್ರಮದಿಂದ ದೂರವಿಟ್ಟು ಬೆಳೆಗಾರರಿಗೆ ನೆರವಾಗಬೇಕೆಂದು ಕೋರಿದರು.

Post a Comment

0 Comments