ಒಂದೂವರೆ ವರ್ಷದ ಮಗುವಿನ ಜ್ಞಾಪಕ ಶಕ್ತಿಗೆ ಒಲಿದ ಐಬಿಆರ್-ಅಬ್ದುಲ್‌ ಕಲಾಂ ವರ್ಲ್ಡ್ ರೆಕಾರ್ಡ್‌




ಹಾಸನ: ಒಂದೂವರೆ ವರ್ಷದ ಬಾಲಕಿ ಚಿಕ್ಕ ವಯಸ್ಸಿನಲ್ಲೇ ಅಗಾಧ ಪಾಂಡಿತ್ಯದಿಂದ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ ಹಾಗು ಕಲಾಂ ವರ್ಲ್ಡ್ ರೆಕಾರ್ಡ್‌ನಿಂದ ಪ್ರಮಾಣ ಪತ್ರ ಪಡೆದಿದ್ದಾರೆ.
ನಗರದ ಉದಯಗಿರಿ ನಿವಾಸಿಯಾದ ಪ್ರವೀಣ್‌ ದೇವಪ್ಪ ಹಾಗು ತನುಶ್ರೀ ಅವರ ಪುತ್ರಿ ಐರಾ ವಿಹಾನ ಸಾಧಕ ಬಾಲಕಿ. ಅತಿಚಿಕ್ಕ ವಯಸ್ಸಿನಲ್ಲೇ ಅದ್ಭುತ ಜ್ಞಾಪಕ ಶಕ್ತಿಯಿಂದಾಗಿ ಗುರುತರ ಸಾಧನೆ ಮಾಡಿರುವುದು ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಬಾಲಕಿಯ ಸಾಧನೆಗೆ ಯುಎಇಎಸ್‌‍ ಪಿಯು ಕಾಲೇಜು ಪ್ರಾಂಶುಪಾಲ ಎ.ಹೆಚ್‌. ಗಣೇಶ್‌ (ತಾತ), ನಗರಸಭೆ ಮಾಜಿ ಸದಸ್ಯ ಹೆಚ್‌. ಶೋಭಾ (ಅಜ್ಜಿ), ಅರಣ್ಯ ಇಲಾಖೆ  ನಿವೃತ್ತ ಸೂಪರಿಂಟೆಂಡೆಂಟ್‌ ಎಂ.ಪಿ. ಶಿವಬಸಪ್ಪ (ತಾತ) ಹಾಗು ಅರಣ್ಯ ಇಲಾಖೆ ನಿವೃತ್ತ ಅಧಿಕಾರಿ ಟಿ.ಗಾಯತ್ರಿದೇವಿ (ಅಜ್ಜಿ) ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಐರಾ ಸಾಧನೆ ಏನು: 
ಬಾಲಕಿ ಐರಾ ವಿಹಾನ  ಶರೀರದ 17 ಅಂಗ, 23 ಪ್ರಾಣಿಗಳ ಹೆಸರು, 9 ಜಲಚರ ಪ್ರಾಣಿ, 17 ಹಣ್ಣು, 16 ತರಕಾರಿ, 9 ಕಾರು ಸಂಬಂಧಿತ ವಸ್ತುಗಳು, 6 ಪಕ್ಷಿ, 24 ಇತರ ವಸ್ತುಗಳನ್ನು ತನ್ನ ಬುದ್ದಿ ಕ್ಷಮತೆಯಿಂದ ನಿರಾಳವಾಗಿ ಗುರುತಿಸಿ ಅದರ ವಿವರಣೆಯನ್ನು ನೀಡುತ್ತಾಳೆ. ಜೊತೆಗೆ 9 ತುಣುಕುಗಳ ಆಕಾರದ ಪಝಲ್‌ ಹಾಗು 8 ತುಣುಕುಗಳ ತರಕಾರಿ, ಹಣ್ಣು ಮತ್ತು ವಾಹನಗಳ ಪಝಲ್‌ಗಳನ್ನು ಬಗೆಹರಿಸುತ್ತಾಳೆ. ಐರಾಳ ಈ ಸಾಧನೆಗಾಗಿ 2025ರ ಮೇ 20ರಂದು ಐಬಿಆರ್‌ ಹಾಗು ಅಬ್ದುಲ್‌ ಕಲಾಂ ವರ್ಲ್ಡ್ ರೆಕಾರ್ಡ್‌ ಪ್ರಮಾಣ ಪತ್ರ ನೀಡಿದೆ.

Post a Comment

0 Comments