ಅನುಭವ ಮಂಟಪಕ್ಕೆ 700 ಕೋಟಿ ರೂ. ಅನುದಾನ




ಹಾಸನ: 700 ಕೋಟಿ ರೂ. ವೆಚ್ಚದಲ್ಲಿ ಸರ್ಕಾರದಿಂದ ಕೂಡಲ ಸಂಗಮದಲ್ಲಿ ಅನುಭವ ಮಂಟಪ ನಿರ್ಮಾಣ ಮಾಡುತ್ತಿದ್ದೇವೆ. ಈಗಾಗಲೇ 350 ಕೋಟಿ ರೂ. ಕೆಲಸ ಮಾಡಲಾಗಿದೆ
ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.
ಹಳೇಬೀಡು ಬಳಿಯ ಪುಷ್ಪಗಿರಿಯ ಸಭಾಂಗಣದಲ್ಲಿ ಭಾನುವಾರ ನಡೆದ ಮೈಸೂರು ವಿಭಾಗ ಮಟ್ಟದ ವೀರಶೈವ ಲಿಂಗಾಯತ ಮಹಾಸಭಾ ಪದಾಧಿಕಾರಿಗಳ ಕಾರ್ಯಾಗಾರ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಅಂಗೈಯಲ್ಲಿ ಲಿಂಗ ಹಿಡಿದು ಪೂಜೆ ಮಾಡುವ ಪ್ರತಿಯೊಬ್ಬರು ಲಿಂಗಾಯಿತ, ವೀರಶೈವರಾಗಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದರು.
ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಘಟಕ ಅಧ್ಯಕ್ಷ ಶಂಕರ ಬಿದರಿ ಮಾತನಾಡಿ, ಪ್ರತಿ ವಿಭಾಗ ಜಿಲ್ಲಾ ಮಟ್ಟದಲ್ಲಿ ಮೈಸೂರು ವಿಭಾಗದಂತೆ ಕಾರ್ಯಾಗಾರ ನಡೆಯಬೇಕು. ಸಮಾಜದ ಸಾಧಕರಲ್ಲಿ ಪುಷ್ಪಗಿರಿ ಶ್ರೀಗಳಾದ ಸೋಮಶೇಖರ ಶಿವಾಚಾರ್ಯರು ಸಮಾಜದ ಏಳಿಗೆ ದುಡಿಯುತ್ತಿರುವವರಲ್ಲಿ ಮೊದಲಿಗರಾಗಿದ್ದಾರೆ ಎಂದು ಹೇಳಿದರು.
ಕಾರ್ಯಾಗಾರದಲ್ಲಿ 5 ನಿರ್ಣಯ ಕೈಗೊಳ್ಳಲಾಯಿತು.
ವೀರಶೈವ ಲಿಂಗಾಯತ ಮಹಾಸಭಾದಲ್ಲಿ ಎಲ್ಲಾ ಘಟಕಗಳನ್ನು ಪುನರುಜ್ಜೀವನಗೊಳಿಸಬೇಕು. ಜಾತಿ ಗಣತಿಯಲ್ಲಿ ಮಹಾಸಭಾ ನಿರ್ಣಯದಂತೆ ಬರೆಸಬೇಕು. ಸಮಾಜಕ್ಕೆ ಮೀಸಲಿರುವ ಸರ್ಕಾರದ ಸೌಲಭ್ಯಗಳನ್ನು ಮಹಾಸಭಾದಿಂದ ಅರ್ಹರಿಗೆ ತಲುಪಿಸಬೇಕು. ಚುನಾವಣೆಯಲ್ಲಿ ವೀರಶೈವ ಲಿಂಗಾಯಿತ ಅಭ್ಯರ್ಥಿಗಳಿಗೆ
ಸೀಟು ದೊರಕುವಂತೆ ಮಹಾಸಭಾ ನೋಡಿಕೊಳ್ಳಬೇಕು ಎಂದು ಕೈಗೊಂಡ ನಿರ್ಣಯವನ್ನು ಸಾಗರ ಹಳ್ಳಿ ನಟರಾಜ್ ಮಂಡಿಸಿದರು.

Post a Comment

0 Comments