ನಗರಸಭೆ ಸಿಬ್ಬಂದಿ ಹೆಸರಲ್ಲಿ ಮನೆಗೆ ಬಂದು ಲಕ್ಷಾಂತರ ರೂ.‌ಬೆಲೆಯ ಚಿನ್ನಾಭರಣ ಕದ್ದ ಕಳ್ಳರು

ಹಾಸನ: ನಗರಸಭೆ ಸಿಬ್ಬಂದಿ ಎಂದು ನೀರಿನ ನಲ್ಲಿ ಕೆಲಸಕ್ಕಾಗಿ ಬಂದಿರುವುದಾಗಿ ಸುಳ್ಳು ಹೇಳಿ ಹೇಳಿದ ದುಷ್ಕಮಿಗಳಿಬ್ಬರು 8.95 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಎಗರಿಸಿ ಪರಾರಿಯಾಗಿರುವ ಘಟನೆ ಅರಸೀಕೆರೆಯ ಶ್ರೀನಗರದಲ್ಲಿ ನಡೆದಿದೆ.
ನಾರಾಯಣ ಅವರ ಪತ್ನಿ ಚಂದ್ರಕಲಾ ಮನೆಯಲ್ಲಿ ಒಬ್ಬರೇ ಇದ್ದಾಗ ಮನೆಗೆ ಬಂದ ಇಬ್ಬರು ಅಪರಿಚಿತರು ತಾವು ನಗರಸಭೆಯವರು ಎಂದು ಪರಿಚಯ ಮಾಡಿಕೊಂಡಿದ್ದಾರೆ. ನಿಮ್ಮ ಮನೆಯಲ್ಲಿ ನಲ್ಲಿಯ ನೀರು ಬರುತ್ತಿದೆಯೇ ಎಂದು ಕೇಳಿದಾಗ ಚಂದ್ರಕಲಾ ಅವರು ಬರುತ್ತಿದೆ ಎಂದಿದ್ದು, ನೀರಿನ ಸಿಂಟೆಕ್ಸ್ ಹತ್ತಿರ ಫಿಲ್ಟರ್‌ ಅಳವಡಿಸಬೇಕು, ಜಾಗ ತೋರಿಸಿ ಎಂದು ಹೇಳಿದ್ದಾರೆ. ಆಗ ಚಂದ್ರಕಲಾ ಅವರನ್ನು ಕರೆದುಕೊಂಡು ಮಹಡಿ ಮೇಲೆ ಹೋಗಿದ್ದಾರೆ. ಇಬ್ಬರೂ ಟ್ಯಾಂಕ್‌ ಹತ್ತಿರ ಟೇಪ್‌ ಹಿಡಿದು ಅಳತೆ ಮಾಡಿ ಮಾತನಾಡುತ್ತಾ ಕಾಲ ಕಳೆದಿದ್ದಾರೆ. ಈ ವೇಳೆ ಚಂದ್ರಕಲಾ ಅವರ ಗಮನ ಬೇರೆಡೆ ಸೆಳೆದು ಕೆಳಗಿಳಿದು ಬಂದ ಅವರು ಬೀರುವಿನಲ್ಲಿಟ್ಟಿದ್ದ 179 ಗ್ರಾಂ ತೂಕದ ಅಂದಾಜು 8.95 ಲಕ್ಷ ರೂ. ಮೌಲ್ಯದ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಾರೆ.

2.20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

ಮತ್ತೊಂದು ಪ್ರಕರಣದಲ್ಲಿ ಮನೆ ಬಾಗಿಲು ಬೀಗ ಮುರಿದು ಒಳನುಗ್ಗಿರುವ ಕಳ್ಳರು 2.20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ವಿಜಯನಗರ ಬಡಾವಣೆಯಲ್ಲಿ ನಡೆದಿದೆ.
ನಿವಾಸಿ ಮಹೇಂದ್ರ ಹಾಗು ಹೆಂಡತಿ ಶೀಲಾ ಅವರು ಶ್ರಾವಣ ಮಾಸದ ಹಿನ್ನಲೆಯಲ್ಲಿ ಅಣ್ಣಿಗನಹಳ್ಳಿಯ ಸಂಬಂಧಿಕರ ಮನೆಗೆ ತೆರಳಿದ್ದರು. 
ಆ. 10ರಂದು ಬೆಳಿಗ್ಗೆ ಮಹೇಂದ್ರ ಅವರು ಮನೆಗೆ ಬಂದು ನೋಡಿದಾಗ ಬಾಗಿಲು ಮುರಿದಿರುವುದು ಗೊತ್ತಾಗಿದೆ. ಬೀರುವಿನ ಬಾಗಿಲು ಮುರಿದಿರುವ ಕಳ್ಳರು 8 ಗ್ರಾಂ ತೂಕದ ಒಂದು ಜೊತೆ ಓಲೆ, 4 ಗ್ರಾಂ ತೂಕದ ಒಂದು ಜೊತೆ ಚಿನ್ನದ ಓಲೆ, 2 ಗ್ರಾಂ ತೂಕದ ಒಂದು ಜೊತೆ ಚಿನ್ನದ ಓಲೆ, ಮಕ್ಕಳ 1 ಗ್ರಾಂ ತೂಕದ 3 ಉಂಗುರ, 2 ಗ್ರಾಂ ತೂಕದ 2 ಉಂಗುರ, 2 ಜೊತೆ ಬೆಳ್ಳಿಯ 26 ಗ್ರಾಂ ತೂಕದ ಕಾಲುಚೈನು, 2 ಜೊತೆ ಬೆಳ್ಳಿಯ 38 ಗ್ರಾಂ ತೂಕದ ಕಾಲುಚೈನು, 12 ಗ್ರಾಂ ತೂಕದ ಬೆಳ್ಳಿಯ ಬ್ರಾಸ್‌‍ ಲೈಟ್‌ ಕಳುವಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post a Comment

0 Comments