ಹಾಸನ: ವೇತನ ಪರಿಷ್ಕರಣೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಕೆಎಸ್ ಆರ್ ಟಿಸಿ ಬಸ್ ಗಳ ಸಂಚಾರ ನಿಷೇಧವಾಗಿದ್ದು ಸಾರ್ವಜನಿಕರು ಖಾಸಗಿ ವಾಹನಗಳ ಮೊರೆ ಹೋಗಿದ್ದಾರೆ.
ಜಿಲ್ಲೆ ಸೇರಿದಂತೆ ತಾಲೂಕು ಕೇಂದ್ರಗಳಲ್ಲಿ ಸಾರಿಗೆ ಬಸ್‌ಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
ನಗರದ ಚನ್ನಪಟ್ಟಣ ಬಸ್ ನಿಲ್ದಾಣ ಸೇರಿದಂತೆ ಎಲ್ಲಾ ಡಿಪೋಗಳಲ್ಲಿ ನೂರಾರು ಬಸ್‌ಗಳು ನಿಂತಿವೆ. ಘಟಕ-1 ಹಾಗೂ ಘಟಕ-2 ರಲ್ಲಿ ಒಟ್ಟು 230 ಬಸ್‌ಗಳು ಕಾರ್ಯನಿರತವಾಗಿಲ್ಲ. ರಾಜಘಟ್ಟ ಮತ್ತು ಆಡುವಳ್ಳಿಯಲ್ಲಿರುವ ಘಟಕಗಳಲ್ಲೂ ಇಂತಹದೇ ಸ್ಥಿತಿ ಇದೆ. ನೌಕರರು ಕರ್ತವ್ಯಕ್ಕೆ ಹಾಜರಾಗದ ಕಾರಣ, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಬಸ್‌ಗಳ ಕೊರತೆಯಿಂದ ಖಾಸಗಿ ಬಸ್‌ಗಳು, ಟಿಟಿ ವಾಹನಗಳು ಹಾಗೂ ಇತರ ಖಾಸಗಿ ವಾಹನಗಳ ಸಂಚಾರ ಹೆಚ್ಚಾಗಿದೆ. ಬಸ್ ನಿಲ್ದಾಣಗಳಲ್ಲಿ ಬಸ್‌ಗಳಿಲ್ಲದೆ ಕಾದು ನಿಂತ ಪ್ರಯಾಣಿಕರು ಅಸಹನೆ ವ್ಯಕ್ತಪಡಿಸಿದರು.
ಆರ್‌ಟಿಓ ಅಧಿಕಾರಿಗಳು ಬಸ್ ನಿಲ್ದಾಣಗಳಿಗೆ ಭೇಟಿ ನೀಡಿ, ಖಾಸಗಿ ವಾಹನ ಚಾಲಕರಿಗೆ ಟಿಕೆಟ್ ದರ ಹೆಚ್ಚಿಸದಂತೆ ಸೂಚನೆ ನೀಡಿದರು.
0 Comments