ಕಾಡಾನೆ ದಾಳಿ: ಮಹಿಳೆಗೆ ಗಂಭೀರ ಗಾಯ

ಹಾಸನ: ಅರಕಲಗೂಡು ತಾಲ್ಲೂಕು ಮದಲಾಪುರ ಗ್ರಾಮದ ಕಮಲಮ್ಮ ಎಂಬುವರ ಮೇಲೆ ಆನೆ ದಾಳಿ ಮಾಡಿರುವ ಘಟನೆ ಇಂದು ರಾತ್ರಿ ನಡೆದಿದೆ.
ತೀವ್ರವಾಗಿ ಗಾಯಗೊಂಡಿರುವ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗೆಂದು ಅರಕಲಗೂಡಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ರಾತ್ರಿ ವೇಳೆ ಮದಲಾಪುರ ಗ್ರಾಮಕ್ಕೆ ನುಗ್ಗಿರುವ ಒಂಟಿ ಆನೆ ಮನೆ ಬಳಿ ಇದ್ದ ಮಹಿಳೆ ಮೇಲೆ ದಾಳಿ ಮಾಡಿದೆ.
 ಗ್ರಾಮಸ್ಥರು ಕೂಗಿಕೊಂಡ ಹಿನ್ನೆಲೆ ಸಮೀಪದ ಕಾಫಿ ತೋಟಕ್ಕೆ ಓಡಿದೆ. ಇಲ್ಲವಾಗಿದ್ದರೆ ಮಹಿಳೆ ಪ್ರಾಣಕ್ಕೆ ಅಪಾಯವಿತ್ತು. ಅದೃಷ್ಟವಶಾತ್ ಮಹಿಳೆ ಪ್ರಾಣಪಾಯದಿಂದ ಪಾರಾಗಿದ್ದಾರೆ.

Post a Comment

0 Comments